top of page

ಉತ್ತರ ಪ್ರದಕ್ಷಿಣೆ- ಉತ್ತರ ಭಾರತ ತೀರ್ಥಯಾತ್ರೆಯ ಕಥನ- ಸಂಚಿಕೆ -6

ಸೀತಾಮಢಿ ಮತ್ತು ಕಾಶಿ ಡೈರಿ- ಮೊದಲ ಭಾಗ:


ಸಂಚಿಕೆ 6:


ಪ್ರಯಾಗರಾಜ್‌ದಿಂದ ಹೊರಟ ಬಸ್ಸು ಸುಮಾರು 1.5 ಗಂಟೆ ನಂತರ ಉತ್ತರ ಪ್ರದೇಶದ ಸೀತಾಮಢಿ ಅಥವಾ ಸೀತಾ ಸಮಾಹಿತ ಸ್ಥಳಕ್ಕೆ ತಲುಪಿತು.

ಉತ್ತರ ರಾಮಾಯಣದ ಪ್ರಕಾರ ಇಲ್ಲಿಯೇ ಶ್ರೀ ರಾಮನು ಸೀತೆ ಮತ್ತು ಅವಳಿ ಮಕ್ಕಳಾದ ಲವ ಕುಶರನ್ನು ಮೊದಲ ಬಾರಿಗೆ ವನವಾಸದಲ್ಲಿ ಕಂಡಿದ್ದು. ಅಲ್ಲಿಯೇ ವಾಲ್ಮೀಕಿಯವರ ಆಶ್ರಮ ಇದ್ದುದ್ದು, ಸೀತೆ ಮತ್ತು ಅವಳಿ ಜವಳಿ ಮಕ್ಕಳು ಹುಟ್ಟಿದ್ದು. ಆ ಲವ ಕುಶ ವೀರ ಮಕ್ಕಳಂತೆ ಬೆಳೆದಿದ್ದರಂತೆ . ಅಲ್ಲಿಗೆ ಬಂದ ಶ್ರೀರಾಮನ ಅಶ್ವಮೇಧದ ಕುದುರೆಯನ್ನು ಬಾಲಕರಾದ ಲವ ಕುಶ ಕಟ್ಟಿಹಾಕುತ್ತಾರೆ. ಮತ್ತು ಅವನಿಗೇ ಸವಾಲು ಹಾಕಿ ನಿಲ್ಲುತ್ತಾರೆ. ಆಗ ಯುದ್ಧಕ್ಕೆ ಬಂದ ಲಕ್ಷ್ಮಣ ಭರತ ಶತ್ರುಘ್ನ ಅಲ್ಲದೇ ಹನುಮಂತನನ್ನೇ ಸೋಲಿಸಿಬಿಡುತ್ತಾರೆ ಈ ಮಕ್ಕಳು. ಅಲ್ಲಿಗೆ ಕೊನೆಗೆ ಶ್ರೀ ರಾಮನು ಬಂದಾಗ ಸೀತಾಮಾತೆಯೇ ತಮ್ಮ ಮಕ್ಕಳ ಪರಿಚಯ ಮಾಡಿಸಿಕೊಡುತ್ತಾಳೆ. ಇಲ್ಲಿಯೇ ಸೀತೆ ತನ್ನ ಅವತಾರ ಮುಗಿಯಿತೆಂದು ಮತ್ತೆ ಭೂಗರ್ಭದಲ್ಲಿ ಐಕ್ಯಳಾಗುತ್ತಾಳೆ, ಮರಳಿ ತನ್ನ ತಾಯಿ ಭೂದೇವಿಯ ಮಡಿಲಿಗೆ. ರಾಮನು ಲವ ಕುಶರೊಂದಿಗೆ ಅಯೋಧ್ಯೆಗೆ ಹಿಂತಿರುಗುತ್ತಾನೆ. ಇದು ಇಲ್ಲಿನ ಸ್ಥಳ ಪುರಾಣ.

ಅಕ್ಕ ಪಕ್ಕದಲ್ಲಿ ಸುತ್ತಲೂ ನೀರಿನ ಕೊಳವಿದೆ. ಬೋಟಿಂಗ್ ಸಹಾ ಇದ್ದಂತಿತ್ತು. ಅಲ್ಲಿ ಯಾರೂ ಆ ಹೊತ್ತಿನಲ್ಲಿ ಕಾಣಲಿಲ್ಲ.

ಇಲ್ಲಿ ಎರಡು ಮೂರು ದೇವಸ್ಥಾನಗಳಿವೆ. ಸ್ವಲ್ಪ ಆಧುನಿಕವಾಗಿಯೇ ಇವೆ.

ಆಕೆ ಭೂಮಿಯಲ್ಲಿ ಲೀನವಾದ ಸ್ಥಳದಲ್ಲಿ ಒಂದು ಚಂದದ ದೇವಸ್ಥಾನವಿದೆ. ಅಲ್ಲಿ ಪಕ್ಕದಲ್ಲಿ ಕೆಲವು ಚಿತ್ರ ಪ್ರದರ್ಶಗಳೂ ಇವೆ. ಅದರ ಪಕ್ಕದಲ್ಲಿ ಶಿವನ ಕೈಲಾಸ ಮತ್ತು ಗಂಗೆ ಇಳಿದುಬರುವಂತಾ ಶಿಲಾಸ್ಮಾರಕವಿದೆ. ಎಲ್ಲಾ ಮೂರ್ತಿಗಳು ಬಹಳ ಮೋಹಕವಾಗಿದೆ.

ಅಲ್ಲದೇ ಅದರ ಸ್ವಲ್ಪ ದೂರದಲ್ಲಿ ಎತ್ತರವಾದ ನಿಂತ ಆಂಜನೇಯನ ಮೂರ್ತಿಯಿದೆ. ಅಲ್ಲಿನ ಕೆಲವು ಚಿತ್ರಗಳನ್ನು ಕೊಟ್ಟಿದ್ದೇನೆ. ಇಲ್ಲಿ ಒಂದು ಮಣ್ಣಿನ ಕಪ್ ( ಕುಲಾಡಿ) ಚಹಾ ಕುಡಿದು ಮತ್ತೆ ವಾರಣಾಸಿಯತ್ತ ಪ್ರಯಾಣ ಬೆಳೆಸಿದೆವು. ಮಧ್ಯೆ ಧಾಭಾದಲ್ಲಿ ನಿಲ್ಲಿಸಿ ನಮ್ಮವರ ಭೋಜನ ನಡೆಯಿತು.

ಸೀತ ಮಢಿ

ಸೀತ ಮಢಿ

ಸೀತ ಮಢಿ

ಸೀತ ಮಢಿ

ಸೀತ ಮಢಿ



ಅಂದು ಕಾಶಿ ತಲುಪಲು ಸಂಜೆಯೇ ಆಗಿಹೋಯಿತು. ಅಲ್ಲಿಗೆ ಸದಾ ವಿಪರೀತ ಟ್ರಾಫಿಕ್ ಇರುತ್ತದೆ. ಬರುತ್ತಾ ಬರುತ್ತಾ ನಿಧಾನವಾಗಿಬಿಡುತ್ತದೆ.


ಅಲ್ಲಿನ ರೈಲ್ವೇ ನಿಲ್ದಾಣದ ಸಮೀಪ ಇದ್ದ Plaza Inn ಹೋಟೆಲ್ 3 ಸ್ಟಾರ್ ತರಹ ಇತ್ತು. ಅಲ್ಲಿ ಬಸ್ಸಿನಿಂದ ಇಳಿದು ಪ್ರವೇಶಿಸಿದೆವು, ಲಗೇಜ್ ನೋಡಿಕೊಳ್ಳುತ್ತಾ, ಇಲ್ಲಿ ಒಂದು ರಾತ್ರಿ ಇಳಿದುಕೊಳ್ಳುವುದಿತ್ತು ರೂಮ್ ಸಿಕ್ಕ ನಂತರ ಸ್ವಲ್ಪ ಕಾಫಿ ಚಹಾ ಕುಡಿದು ಅರ್ಧಗಂಟೆಗೆಲ್ಲಾ ಮತ್ತೆ ಕೆಳಗಿನ ಲಾಬಿಗೆ ಬಂದೆವು.

ಕೆಳಗೆ ಮತ್ತೆ ಶೇರ್ ಆಟೋ ಮಾಡಿಕೊಟ್ಟ ಮೇಲೆ 6-8 ಜನರನ್ನು ಒಂದೊಂದರಲ್ಲಿ ಕೂರಿಸಿಕೊಂಡು ಸಂಜೆಯ ಭೇಟಿಗಳಿಗೆ ಹೊರಟೆವು.

ಆಟೋ ಮಾಡಿಕೊಂಡು 3 ಗಂಟೆ ಕಾಲ ಸುತ್ತಿದ್ದು...

೧. ಸಂಕಟ ಮೋಚನ‌ ಹನುಮಾನ್ ದೇವಾಲಯ

೨. ತ್ರಿದೇವ್ ಮಂದಿರ

೩. ತುಲಸಿ ಮಾನಸ ಮಂದಿರ

೪. ದುರ್ಗಾ ಮಂದಿರ

೫. ಕವಡೀ ದೇವಿ ಮಂದಿರ

ಎಲ್ಲಾ ದೇವಸ್ಥಾನಗಳು ಸುಂದರ ಚೊಕ್ಕ ಮತ್ತು ಅಚ್ಚುಕಟ್ಟಾಗಿದೆ. ಕೆಲವು ಹೊಸ ಕಟ್ಟಡಗಳು ಸಹಾ.


ಕವಡಿ ದೇವಿ, ಕಾಶಿ

ತುಲಸಿ ಮಾನಸ ಮಂದಿರ

ಸಂಕಟ ಮೋಚನ ಹನುಮಾನ ದೇವಸ್ಥಾನ



ತ್ರಿದೇವ್ ಮಂದಿರ

ತ್ರಿದೇವ್ ಮಂದಿರ

ತ್ರಿದೇವ್ ಮಂದಿರ

ತ್ರಿದೇವ್ ಮಂದಿರ

ತ್ರಿದೇವ್ ಮಂದಿರ


ಕಾಶಿ ನಗರ ನಿಜವಾಗಿ ನನ್ನನ್ನು ಅಚ್ಚರಿಗೊಳಿಸಿತು. ಒಂದೆಡೆ ಕಿಷ್ಕಿಂದೆಯಂತಾ ಗೋಜಲು ಗಲಿಗಳು. ಬದಿಯಲ್ಲೇ ಇನ್ನೊಂದು ಕಡೆ ಬೆಳೆದಿದೆ ಮಾಡರ್ನ್ ಸಿಟಿ..ದೊಡ್ಡ ಬ್ರಾಂಡ್ ಮಳಿಗೆಗಳು, ಹೋಟೆಲ್, ಶಾಪಿಂಗ್, ಯಾವ ಮೆಟ್ರೋ ನಗರಕ್ಕೂ ಕಡಿಮೆಯಿಲ್ಲ..

ಮೋದಿ ಬಗ್ಗೆ ಅಪಾರ ಒಲವು,ಮೆಚ್ಚುಗೆ ಯಾಕೆಂದರೆ ಯಾವ ತರಹದ ಹಳೇ ಗೊಜಾಗೊಂಡಲ ಊರನ್ನು ಸ್ವಚ್ಛ ಶೈನಿಂಗ್ ನಗರವಾಗಿ ಬದಲಾಯಿಸಲು ಅವರು ಮತ್ತು ಯೋಗಿ ಶ್ರಮಿಸಿದ್ದಾರೆ ಎನ್ನುತ್ತಾರೆ; 2014 ರ ಮುಂಚೆ ಈ ಊರನ್ನು ವಿಸಿಟ್ ಮಾಡಿದ ನಮ್ಮ ಸಹ ಪ್ರಯಾಣಿಕರೇ ಹೋಲಿಸಿ ಹೇಳಿದರು... ನಿಜಕ್ಕೂ ಈ ಮುಖ್ಯಮಂತ್ರಿ- ಶ್ರಮ `ಯೋಗಿ’

ನಾನಿಲ್ಲಿ ಯಾವುದೇ ಪೊಲಿಟಿಕಲ್ ಸ್ಟೇಟಮೆಂಟ್ ಮಾಡುತ್ತಿಲ್ಲ..ಜಸ್ಟ್ ಬೈ ವಾಚಿಂಗ್ ಅಂಡ್ ಲರ್ನಿಂಗ್...👍🙏

ಕೆಲವು ಮಾತ್ರ ಚಿತ್ರಗಳು ಇಂದಿನವು...ಕೆಲವು ಕಡೆ ಮೊಬೈಲ್ ಅಲೋ ಮಾಡಲಿಲ್ಲ.

ಮತ್ತೆ ರಾತ್ರಿ ಊಟ ಮಾಡಿದ ನಂತರ ಹೇಳಿದ್ದರು- "ನಾಳೆ ನಮ್ಮ ಬಿಗ್ ಡೇ...

ಬೆಳಿಗ್ಗೆ 6ಕ್ಕೆಲ್ಲಾ ಕಾಶಿಯಲ್ಲಿ ಪಿತೃಕಾರ್ಯ ಮಾಡಿ ಅನಂತರ ಕಾಶಿ ವಿಶ್ವನಾಥನ ದೇವಸ್ಥಾನದ ಸುತ್ತಲಿನ ಹೊಸ ಕಾರಿಡಾರ್ ಪ್ರವೇಶ ಪ್ರಾಂಗಣ ಎಲ್ಲಾ ನೋಡುವುದಿದೆ. ಬೇಗ ಮಲಗಿ 5.30ಕ್ಕೆಲ್ಲಾ ಎದ್ದು ರೆಡಿಯಾಗಿ ಹೊರಡುವುದಿದೆ".

ರಾತ್ರಿಯೇ ಕೆಲವು ಅವಶ್ಯಕ ಬಟ್ಟೆಗಳನ್ನು ಒಗೆದು ಅಲ್ಲಲ್ಲೇ ಒಣಗಿ ಹಾಕಿಕೊಂಡೆವು. ನಾಳೆಯಲ್ಲಾ ಒಣಗಲಿ ಎಂದು.


ಆ ಬಗ್ಗೆ ಮುಂದಿನ ಸಂಚಿಕೆಯಲ್ಲಿ...


ಸಂಚಿಕೆ 7>>>> ಬರುತ್ತಿದೆ


93 views0 comments

Comments


bottom of page