top of page

 ನನ್ನ ಪ್ರಕಟಿತ ಪುಸ್ತಕಗಳು ಮತ್ತು ಉಚಿತ ಬರಹಗಳು

ನನ್ನ ಉಚಿತ ಪ್ರತಿಲಿಪಿ ಖಾತೆ ಇಲ್ಲಿದೆ:

  

 

01

 

 

ಕರಾಳ ಗರ್ಭ:

ಪತ್ತೇದಾರ ವಿಜಯ್ ದೇಶಪಾಂದೆಯ ಮೊದಲ ಕೇಸ್.

ಪತ್ತೇದಾರ ವಿಜಯ್ ದೇಶಪಾಂಡೆ ಬಳಿ ಕಿರುತೆರೆಯ ದೊಡ್ಡತಾರೆ ಮೃದುಲಾ ಹೊಸಮನಿ ತನ್ನ ಜನ್ಮ ಕೊಟ್ಟ ತಂದೆ ತಾಯನ್ನು ಹುಡುಕಿಕೊಡುವ ಕೆಲಸ ವಹಿಸುತ್ತಾಳೆ. ಮೂವತ್ತೈದು ವರ್ಷದ ಕೆಳಗೆ ಅವಳನ್ನು ಹುಟ್ಟಿದಾಕ್ಷಣ ದತ್ತು ಕೊಟ್ಟಿದ್ದ ಕರಾವಳಿ ಊರಿಗೆ ವಿಜಯ್ ಭೇಟಿ ನೀಡಿ ತನ್ನ ಶೋಧನೆ ನೆಡೆಸಲು ಹಲವಾರು ಸಂಕೀರ್ಣ ಸಮಸ್ಯೆಗಳಲ್ಲಿ ಸಿಲುಕಿ ಆ ಊರಿನ ಪ್ರಬಲರ ವಿರೋಧವನ್ನು ಅವನೂ ಅವನ ವಕೀಲ ಗೆಳತಿ ಲೂಸಿಯೂ ಎದುರಾಗುತ್ತಾರೆ.. ಕೆಲವರು ಅದಕ್ಕಾಗಿ ಕೊಲ್ಲಲೂ ಹೇಸಲಾರರು.. ನಿಜಕ್ಕೂ ಆ ಕಾಲದಲ್ಲಿ ನೆಡೆದ ಜನ್ಮ ರಹಸ್ಯವೇನು? ಯಾರ ಸಂಚು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರವನ್ನು ಜೀವಸಹಿತ ಉಳಿದು ವಿಜಯ್ ಬಯಲಿಗೆಳೆಯಬಲ್ಲನೆ? ರೋಚಕ ತಿರುವಿನೊಂದಿಗೆ ಅಂತ್ಯ...!

02

 

 

 

 

 

 

 

ಮುಳುಗುವ ಕೊಳ:

ಪಡಿಯಚ್ಚಿನಂತಾ ಅವಳಿ ಜವಳಿ ಅಕ್ಕ ತಂಗಿ ಅಂಚನಾ ಮತ್ತು ಕಂಚನಾರಲ್ಲಿ, ಓರ್ವಳು ನಾಟಕದ ನಟಿ; ಮತ್ತೋರ್ವಳು ದೇಶದ ಕೋಟ್ಯಾಧೀಶ್ವರನ ಮುದ್ದಿನ ಪತ್ನಿ..ತಂಗಿಯ ಹೆಸರಿನಲ್ಲಿ ಐದು ಕೋಟಿ ರೂ ಜೀವ ವಿಮಾ ಪಾಲಿಸಿ ಕೊಂಡಿದ್ದ ಅಕ್ಕ ಸ್ವಲ್ಪ ಕಾಲದಲ್ಲಿಯೇ ಸಂಶಯಾಸ್ಪದವಾಗಿ ಈಜುಕೊಳದಲ್ಲಿ ಮುಳುಗಿ ಸಾಯುತ್ತಾಳೆ. 

ವಿಮಾ ಕಂಪನಿ ಈಗ ಐದು ಕೋಟಿ ಸಂದಾಯ ಮಾಡುವ ಮೊದಲು ತನ್ನ ಪತ್ತೇದಾರನ ಮೂಲಕ ಇದರಲ್ಲೇನಾದರೂ ವಂಚನೆಯಿದೆಯೆ ಎಂದು ತನಿಖೆ ಆರಂಭಿಸುತ್ತದೆ... 

ಪತ್ತೇದಾರ ಕೆದಕಿದಷ್ಟೂ ಒಂದಕ್ಕಿಂತಾ ಒಂದು ಕುತೂಹಲಕಾರಿ ರಹಸ್ಯಗಳು ಬಯಲಾಗುತ್ತಾ ಹೋಗಿ ಈ ಕೇಸ್ ನಿರೀಕ್ಷಿಸಿರದ ರೀತಿಯಲ್ಲಿ ಮುಕ್ತಾಯ ಕಾಣುತ್ತದೆ..

03

ಸುವರ್ಣ ಕರಾವಳಿ

ಪಶ್ಚಿಮ ಕರಾವಳಿಯಲ್ಲಿ ಕಳುವಾದ ಜಲಾಂತರ್ಗಾಮಿ ಸಬ್-ಮೆರೀನ್ ನೌಕೆಯ ಶೋಧಕ್ಕೆಂದು ನೇವಿ ಏಜೆಂಟ್ ಕ್ಯಾಪ್ಟನ್ ಸಾತ್ವಿಕ್ ಅರಸ್,  ಕಪಟ ನಾಟಕವಾಡಿ ಕಾರವಾರ ಬಳಿ ಗೋವಾ ಗಡಿಯಲ್ಲಿರುವ ತೈಲ ಬಾವಿ ರಿಗ್ ಒಡೆಯ ಕಮಾಡೋರ್ ನಾಯಕ್‍‌ರವರ ಮನೆ ಸೇರುತ್ತಾನೆ. 

ಅವರ ಮನೆಯಲ್ಲಿ ಸಂದೇಹಾಸ್ಪದ ವ್ಯಕ್ತಿಗಳ ಕೂಟವೊಂದು ಯಾವುದೋ ದೇಶದ್ರೋಹಿ ಅಂತರರಾಷ್ಟ್ರೀಯ ಷಡ್ಯಂತ್ರ ರಚಿಸಿ ಸಾಗರದಡಿಯ ನಿಧಿ ಕಳ್ಳ ಶೋಧನೆಗಾಗಿ ಸಾತ್ವಿಕ್‌ನನ್ನು ಒಪ್ಪಿಸುತ್ತಾರೆ..ಆದರೆ ಸಾತ್ವಿಕ್ ಅಂತಾ ಮುಗ್ದನೇನಲ್ಲ..

 

ಅವರ ರಹಸ್ಯ ನಿಧಿ ಯಾವುದು , ಯಾರದ್ದು ಎಂದು ಪತ್ತೆ ಹಚ್ಚಲೆಂದೇ ಅವರ ಜತೆಗೆ ಸಹಕರಿಸುವ ನಾಟಕವಾಡುತ್ತಾ ಎಲ್ಲವನ್ನೂ ಪತ್ತೆ ಮಾಡಲು ಹೊರಡುತ್ತಾನೆ.. 

 

ತಮ್ಮ ಮನೆಯಲ್ಲೇ  ಕಮಾಡೋರ್ ನಾಯಕ್ ಮತ್ತು ಅವರ ದಿಟ್ಟ ಪುತ್ರಿ ಸುಮನಾ ಏಕೆ ದಿಗ್ಬಂಧನದಲ್ಲಿದ್ದಾರೆ?...ಅವನ ಸಹಾಯ ಮಾಡಲು ಬಂದ ಹಮಿದ್ ಅಲಿ ಯಾರು, ಅವನಿಗೇನಾಯಿತು?..

.

ಸಾತ್ವಿಕ್‌ನ ಶೋಧನೆಯ ಹಾದಿ ಸುಗಮವೇನಲ್ಲ, ಹಲವು ಅಪಾಯಗಳು, ಶತ್ರುಗಳು ಅವನ ದಾರಿಯಲ್ಲಿ ಸವಾಲು ಒಡ್ಡುತ್ತಾರೆ.. ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುವ,  ಅಂಡರ್-ವಾಟರ್ (ನೀರಿನಡಿ) ಸಾಹಸಗಳನ್ನೊಳಗೊಂಡ, ಕೊನೆಯ ಪುಟದವರೆಗೂ ಸಸ್ಪೆನ್ಸ್ ಕಾದಿರಿಸಿಕೊಳ್ಳುವಂತಾ ಕತೆ 

04

 
 

ನಾಳೆಯನ್ನು ಗೆದ್ದವನು:

ಇಂಟೆಲಿಜೆನ್ಸ್ ಬ್ಯೂರೋ ಉಪ ನಿರ್ದೇಶಕ ಅಭಿಮನ್ಯು ಸಾಲಿಯಾನ್ ಜನವರಿ 1, 2050  ರ ಬೆಳಿಗ್ಗೆ ನಂದಿಬೆಟ್ಟದಿಂದ ಕಾರಿನಲ್ಲಿ ಬರುತ್ತಿರಲು ಬೃಹತ್ ಗಾತ್ರದ ಲೋಹದ ಗೋಲಾಕಾರದ ಒಂದು ಗಗನನೌಕೆ ಅವನೆದುರು ಆಗಸದಲ್ಲಿ ಕಂಡುಬಂದು ಅವನನ್ನು ಬಲವಂತವಾಗಿ ಒಳಕ್ಕೆ ಸೆಳೆದೊಯ್ಯುತ್ತದೆ. ಆರು ಆಯಾಮಗಳಲ್ಲಿ ಇದ್ದು ಮಾನವನ ಕಣ್ಣಿಗೇ ಬೀಳದಂತೆ ಇರುವ ಬಿಲಿಯನ್ ಜ್ಯೊತಿವರ್ಷ ಕಾಲ ಮುನ್ನೆಡೆದಿರುವ ಈ ಅನ್ಯಗ್ರಹ ಜೀವಿ ತಂಡದ ಕ್ಯಾಪ್ಟನ್ ಏಸ್ ಮಾನವರೂಪದ ಹೋಲೋಗ್ರಾಮಿನಲ್ಲ್ಲಿ ಎದುರಾಗಿ ತಾವು ಕಾಲ-ದೇಶಗಳ ಸೃಷ್ಟಿಯ ಮರ್ಮವನ್ನು ಭೇಧಿಸಿದವರೆಂದೂ, ತಾವು ಇಚ್ಚಾಬಲದಿಂದಲೇ ಮಾನವನಿಗೆ ಇಂದು ನಂಬಲಸಾಧ್ಯವಾದ ವೈಜ್ಞಾನಿಕ ಸಾಧನೆ ಪವಾಡಗಳನ್ನು ಮಾಡಿ ಉದಾಹರಣೆ ಕೊಟ್ಟು  ಅಭಿಮನ್ಯುವಿಗೆ ಅಂದು ಸಂಜೆಯೊಳಗೆ ತಾವು ಕಂಡ ಒಂದು ಭಯೋತ್ಪಾದಕರ ಜಾಲದ ಬಗ್ಗೆ ಮಾಹಿತಿ ನೀಡುತ್ತಾರೆ. ಅವನನ್ನು ಕಾಲಮಾನದಲ್ಲಿ ಹಿಂದಿನ ದಿನಕ್ಕೆ ಭೂಮಿಗೆ ಕೊಂಡೊಯ್ದು ಬಿಡಲು ಒಂದು ವರ್ಮ್ ಹೋಲ್ ಅಥವಾ ಹುಳುಹಾದಿ ಸುರಂಗವನ್ನು ಅಂತರಿಕ್ಷದಲ್ಲಿ ಸೃಷ್ಟಿಸಿ ಕೊಡಬಲ್ಲೆವೆಂದೂ ಹೇಳಿ ಅವನಿಂದ ಒಂದು ದಿಟ್ಟ ಸಾಹಸವನ್ನು ಕೋರುತ್ತಾರೆ.

ಅದೇ ಉಗ್ರವಾದಿಗಳ ಸಂಚಿನಿಂದ ಹಿಂದಿನ ಬಾಂಬ್ ದುರ್ಘಟನೆಯಲ್ಲಿ ತನ್ನ ಪ್ರಿಯತಮೆ ಅನುಪಮಾಳನ್ನು ಕಳೆದುಕೊಂಡಿದ್ದ ಅಭಿಮನ್ಯುಗ ಸೇಡು ಕೆರಳುತ್ತದೆ.  ಈ ಬಾರಿಯ ಟ್ರೈನ್ ಬಾಂಬ್ ಸಂಚಿಗೆ, ಭವಿಷ್ಯದ ವಿಶ್ವಶಾಂತಿಯ ಆಶಾಕಿರಣವಾಗಬಹುದಾದ ಬಾಲಕನೊಬ್ಬನನ್ನು ಜೀವ ಸಹಿತಾ ಕಾಪಾಡಲು ಅನ್ಯಗ್ರಹ ಜೀವಿಗಳು ಹಾಕಿದ್ದ ಈ ಯೋಜನೆಗೆ ಒಪ್ಪಿಕೊಳ್ಳುತ್ತಾನೆ.

ಕಾಲದೇಶಗಳ ಸಂಕೀರ್ಣ ಅಂತರಿಕ್ಷದಲ್ಲಿ ಹುಳುಹಾದಿಯಲ್ಲಿ ರೋಮಾಂಚಕಾರಿಯಾಗಿ ಬಿದ್ದು ಹಿಂದಿನ ದಿನಕ್ಕೆ ಪ್ರಯಾಣ ಮಾಡಿದ ಅಭಿಮನ್ಯು, ನಗರದ ಹೊರವಲಯದ ಅಡಗುತಾಣದಲ್ಲಿ ನ್ಯೂ ಗ್ಲೋಬಲ್ ಫ಼ೋರ್ಸ್ ಎಂಬ ಉಗ್ರವಾದಿಗಳ ತಂಡ ಬಾಂಬ್ ತಯಾರಿಕೆಯಲ್ಲ್ಲಿ ತೊಡಗಿರುತ್ತಾರೆ. ಅವರೇ ಇತ್ತ ಪೋಲಿಸ್ ಅಧಿಕಾರಿಗಳ ಬಾಯಿ ಮುಚ್ಚಿಸಲು ಅಭಿಮನ್ಯುವಿನ ಬಾಸ್ ಮಗಳು ಸವಿತಾಳನ್ನು ಕಾಡಿನ ಮನೆಯಲ್ಲಿ ಅಪಹರಿಸಿ ಬಚ್ಚಿಟ್ಟಿರುತ್ತಾರೆ.

ಶಸ್ತ್ರಸನ್ನದ್ಧನಾಗಿ ಬಂದ ಅಭಿಮನ್ಯು ದಿಟ್ಟತನದಿಂದ ಹೋರಾಡಿ ಅವರ ಮುಖ್ಯ ಬಾಂಬ್ ಸಲಕರಣೆಗಳನ್ನು ನಾಶಪಡಿಸಿ ಅವರ ಮೇಲೆ ಎರಗುತ್ತಾನೆ. ಆದರೆ ಒಂದು ಚಿಕ್ಕ ಬಾಂಬನ್ನು ಕದ್ದೊಯ್ಯಲು ಶಕ್ತನಾದ ಇಕ್ಬಾಲ್ ಮಿಯಾ ಎಂಬ ಭಯೋತ್ಪಾದಕರ ನಾಯಕ ಅಭಿಮನ್ಯು ಮನೆಗೆ ಬಾಂಬ್ ಇಟ್ಟು ಅತ್ಮಹತ್ಯಾದಾಳಿ ಮಾಡಿ ನೆರೆಹೊರೆಯ ನಾಗರೀಕರನ್ನು ಬಲಿ ತೆಗೆದುಕೊಳ್ಳಲು ಓಡುತ್ತಾನೆ. ಅವನನ್ನು ಬೆನ್ನಟ್ಟಿ ತನ್ನ ಮನೆ ಹಿಂದಿನ ಸರ್ವೇ ತೋಪಿನಲ್ಲಿ ಕೊಲ್ಲುವುದರಲ್ಲಿ ನಾಯಕ ಯಶಸ್ವಿಯಾಗುತ್ತಾನೆ. ಸವಿತಾಳನ್ನು ಕಾಡಿಂದ ರಕ್ಷಿಸಿ ಆಕೆಯ ತಂದೆಯ ಬಳಿಗೆ ತಲುಪಿಸುತ್ತಾನೆ.

ಹುಳುಹಾದಿ ಹಿಡಿದು ಮತ್ತೆ ಸುಯ್ಯನೆ ಅಂತರಿಕ್ಷದಲ್ಲಿ ಗಗನನೌಕೆಗೆ ವಾಪಸಾದ ಅಭಿಮನ್ಯುಗೆ ಅಚ್ಚರಿ ತರುವಂತೆ ಸತ್ತ ಅನುಪಮಾಳ ಆತ್ಮವು ಹೋಲೋಗ್ರಾಮಿನಲ್ಲಿ ಬಂದು ಅವನನ್ನು ಸಂತೈಸಿ ಅವನಿಗೆ ಸವಿತಾಳಂತ ದಿಟ್ಟ ಹೆಣ್ಣನ್ನು ಮದುವೆಯಾಗಲು ಸಲಹೆ ಕೊಡುತ್ತದೆ.

ಜನವರಿ 1 2050 ಗೆ ಮರಳಿ ಬಂದ ಅಭಿಮನ್ಯುವಿಗೆ ಹಿಂದಿನದೆಲ್ಲಾ ಬದಲಾಗಿ ಹೊಸದಿನವೇ ಆರಂಭವಾಗುತ್ತದೆ. ಯಾರೂ ನಂಬಲಾಗದ ಅನ್ಯಗ್ರಹ ಜೀವಿಗಳ ಕಾಲಯಾನದ ರಹಸ್ಯವನ್ನು ಆಫ಼ೀಸಿನಲ್ಲಿ ತಿಳಿಸದೇ ತಾನೇ ಮನದಲ್ಲಿ ಗುಪ್ತವಾಗಿಟ್ಟುಕೊಂಡು ಸವಿತಾಳನ್ನು ವರಿಸುವುದಕ್ಕೆ ಅಭಿಮನ್ಯು ಮುಂದಾಗುತ್ತಾನೆ.

05

 

 

 

 

 

 

 

 
ರಕ್ತಚಂದನ:

17 ಕತೆಗಳು ಮತ್ತು ನೀ:ಳ್ಗತೆಗಳ ಹೂರಣ ಇಲ್ಲಿದೆ.

ಕನ್ನಡ ದಿನಪತ್ರಿಕೆಗಳಲ್ಲಿ ಪ್ರಕಟವಾದ ಪತ್ತೇದಾರಿ ಕತೆಗಳ ಸಂಕಲಿತ ರೂಪವೇ ರಕ್ತಚಂದನ. ಈ ಪುಸ್ತಕದಲ್ಲಿ ಒಟ್ಟು ೧೭ ಕತೆಗಳಿದ್ದು ಬಹಳಷ್ಟು ಕತೆಗಳು ಅಪರಾಧ, ಕೊಲೆ, ಕಳ್ಳತನ ಇತ್ಯಾದಿ ಪತ್ತೇದಾರಿಕೆಗೆ ಒಳಪಡುವ ಕತೆಗಳೇ ಆಗಿವೆ. ಅಂದಮಾತ್ರಕ್ಕೆ ಅದೇ ವಸ್ತು ಎಂದು ತಿಳಿಯಬೇಡಿ, ಸಾಮಾಜಿಕ, ಯುವ ಪೀಳಿಗೆಯ, ಸಂದೇಶವಿರುವ , ಸನ್ನಡತೆ ಎತ್ತಿ ತೋರುವ ಕತೆಗಳೂ ಇವೆ. ಇದಕ್ಕೆ ಉದಾ, ” ಮಾರುತಿಯ ಟ್ರೀಟ್” ಈ ಕತೆ ಚಿಕ್ಕದು, ಆದರೆ ಉದಾತ್ತ ವಸ್ತುವನ್ನು ಒಳಗೊಂಡದ್ದು. ಇಂತಹ ವಿಭಿನ್ನ ಕಥಾವಸ್ತುಗಳುಳ್ಳ ಹಲವಾರು ಕತೆಗಳು ಈ ಕೃತಿಯಲ್ಲಿವೆ. 

06

 
ಅಬಲೆಯ ಬಲೆ:

ಪತ್ತೇದಾರಿ ರಹಸ್ಯಮಯ ಕಾದಂಬರಿ ‘ಅಬಲೆಯ ಬಲೆ’. ಇದು ಪತ್ತೇದಾರ ಜೋಡಿ- ವಿಜಯ್- ವಿಕ್ರಮರ ತನಿಖೆಯ ಸರಣಿಯಲ್ಲಿ ಎರಡನೇ ಪ್ರತ್ಯೇಕ ಕತೆಯಾಗಿದೆ. ಈಗಾಗಲೇ ಈ ನಿಸ್ಸೀಮ ಜೋಡಿಯ ಪರಿಶೋಧನೆ ಮತ್ತು ಸಾಹಸವನ್ನು ‘ಕರಾಳ ಗರ್ಭ’ ಕಾದಂಬರಿಯಲ್ಲಿ ಚಿತ್ರಿಸಿದ್ದಾರೆ. ‘ಅಬಲೆಯ ಬಲೆ’ ಎಂಬ ’ಪನ್’ ಶೀರ್ಷಿಕೆ ಇಟ್ಟಿರುವುದಕ್ಕೂ ಕತೆಯಲ್ಲಿ ಬಲವಾದ ಕಾರಣವಿದೆ. ಇದು ಇಂದಿನ ಪ್ರಸ್ತುತ ವಿದ್ಯಮಾನಗಳಲ್ಲಿ ತಲೆಬರಹದಲ್ಲಿ ಕಾಣಿಸಿಕೊಳ್ಳುವ ‘ಮನಿ ಲಾಂಡರಿಂಗ್’ ( ಅಕ್ರಮ ಹಣ ವಹಿವಾಟು) ವಿವಾದದ ಸುತ್ತ ಹೆಣೆದ ಓರ್ವ ಅಸಹಾಯಕ ತಾಯಿಯ ನಿಗೂಢ ಕತೆ. ಈಕೆ ಮತ್ತು ಪತ್ತೇದಾರರು ಹೇಗೆ ಚಿತ್ರರಂಗ ಮತ್ತು ಬ್ಯಾಂಕಿಂಗ್ ಎರಡನ್ನೂ ಸುತ್ತಿರುವ ಕರಾಳ ದಂಧೆಯ ಮುಸುಕನ್ನು ಸರಿಸಬಲ್ಲರು ಎಂಬುದೇ ಸ್ವಾರಸ್ಯ ಕತೆ.

07

 
 
ಹಿಮಜಾಲ:

ಹಿಮಾಲಯದಲ್ಲಿ ತಟ್ಟಿತೆ ಅಪರಾಧದ ಬಿಸಿ? ಎಂಟು ತಿಂಗಳ ಹಿಂದೆ ಕಾಣೆಯಾದ ದುಶ್ಯಂತರ ಪತ್ನಿ ನಿರ್ಮಲಾರನ್ನು ಉತ್ತರಾಖಾಂಡಲ್ಲಿ ಹುಡುಕುತ್ತ ಹೊರಟ ಪತ್ತೇದಾರ ಜೋಡಿ ವಿಜಯ್‌ ವಿಕ್ರಮ್‌ ಗೆ ಎದುರಾಯಿತೆ ಬೃಹತ್‌ ಅಂತರಾಷ್ಟ್ರೀಯ ಜಾಲ? ಹಲವಾರು ಆಳವಾದ ವಂಚನೆ ಮತ್ತು ಅಪಾಯಕಾರಿ ಯೋಜನೆಯನ್ನು ಬಿಡಿಸಿ ಜೀವಸಹಿತ ಬರುವುದು ಅಷ್ಟು ಸುಲಭವಲ್ಲ...ಅಲ್ಲಿ ನಡೆದ ಕೌತುಕ ರಹಸ್ಯ ಘಟನೆಗಳ ಬೆಂಬೆತ್ತಿದಾಗ, ಎದುರಾದ ಅಡಿಗಡಿಗೆ ಅಪಾಯವನ್ನು ' ಮೀರಬಲ್ಲರೆ ಪತ್ತೇದಾರರು? ಕೇವಲ ಮಿಸ್ಸಿಂಗ್‌ ಕೇಸ್‌ ಎಂದು ಹೊರಟವರಿಗೆ ಬಂದಿತೇಕೆ ಜೀವಾಪಾಯದ ರಿಸ್ಕ್‌?

ಆದರೆ ಅಲ್ಲಿ ಛಲ ಬಿಡದ ಸಾಹಸಿಗಳಿಗೆ ಕನ್ನಿಕಾ ಎಂಬ ದಿಟ್ಟ ಯುವತಿ ಜತಯಾಗುತ್ತಾಳೆ...ಈಗ ಕೇವಲ ನಿರ್ಮಲಾ ಮಾತ್ರವಲ್ಲ.. ಭೇಧಿಸಬೇಕಾದೀತು ಅಂತರಾಷ್ಟ್ರೀಯ ಜಾಲವನ್ನು. ಓದಿ ನೋಡಿ! ...ರಹಸ್ಯಮಯ ಕಾದಂಬರಿ.

08

 
 
 
 
 
 
 
 
ರಹಸ್ಯಾಯನ:

ಆರು ಕತೆ ಮತ್ತು ನೀಳ್ಗತೆಗಳಲ್ಲಿ ಐದು ಪ್ರತಿಲಿಪಿ ಕಥಾ ಸ್ಪರ್ಧೆಗಳಲ್ಲಿ ಬಹುಮಾನ ವಿಜೇತರಾಗಿ ಸಹಸ್ರಾರು ಓದುಗಳನ್ನು ಪಡೆದಿವೆ.!!

ಇಲ್ಲಿ ಅನ್ಯಗ್ರಹ ಜೀವಿಗಳ ರಹಸ್ಯ ಕಾರ್ಯಾಚರಣೆಯಿದೆ. ಲೆಮೂರಿಯಾ ಎಂಬ ಮುಳುಗಿದ ಖಂಡದ ರೋಚಕ ಕತೆಯಿದೆ. ರಾಮಾಯಣದ ಕಾಲದ ಸುವರ್ಣ ಬೆಟ್ಟದ ಶೋಧದ ಥ್ರಿಲ್ಲರ್ ಕತೆಯಿದೆ. ವಿನಾಶವಾದ ಜಗತ್ತಿನಲ್ಲಿ ಎದ್ದು ಹೋರಾಡಿದ ಯುವ ಜೋಡಿಯ ರೋಮಾಂಚನವಿದೆ.. ಓದು ಸವಿಯಬೇಕು ಮಾಡರ್ನ್ ಮತ್ತು ಪುರಾಣದ ಕೋಂಬೋ ಥ್ರಿಲ್ಲರ್ ಕತೆಗಳನ್ನು!!

 

 

09

 
 
 
Time Renewed

A UFO kidnaps an Indian IB chief in its spacecraft and a fantastic journey into his past through a wormhole begins the adventure of his lifetime where he has to match his wits and courage against a terrorist gang. This is translation of the author's own successful Kannada novel Naaleyannu Geddavanu.

10

ರೋಚಕಥೆ
ನಾಲ್ಕು ಕಥೆಗಳ ಥ್ರಿಲರ್ ಪತ್ತೇದಾರಿ ಸಂಕಲನ.

 ನನ್ನ ನಾಲ್ಕು ಕುತೂಹಲಕಾರಿ ಕಥೆಗಳ ಸಂಕಲನ- ಇ ಪುಸ್ತಕ

"ರೋಚಕಥೆ"

1. ಕೋರ್ಟ್ ರೂಮ್ ಮಿಸ್ಟರಿ ( ಪೆರ್ರಿ ಮೇಸನ್ ಅಳವಡಿಕೆ)

2. ಕ್ರೈಮ್ ಥ್ರಿಲ್ಲರ್ ಪೋಲೀಸ್ ಪತ್ತೇದಾರಿ

3. ನಾಯಕಿ ಪ್ರಧಾನ ಸಾಮಾಜಿಕ ಕಥೆಯಲ್ಲಿ ಪತ್ತೇದಾರಿ

4. ಥಿಯೇಟರಲ್ಲಿ ಸಿನೆಮಾ ನೋಡುವಾಗ ಕೊಲೆ- ಒಂದಾ? ಎರಡಾ? ಮೂರಾ?

ಪುಸ್ತಕಗಳು

bottom of page