top of page
Writer's pictureNagesh Kumar

ಮಂಗಳಗ್ರಹದಲ್ಲಿ ನಾಗರೀಕತೆ ಇತ್ತೆ? -2

2.ಮಂಗನಿಂದ ಮಾನವನಿಗೂ ಮುನ್ನ ಮಂಗಳನಲ್ಲಿ ಮಾನವ?

ಮಂಗಳ ಗ್ರಹದಲ್ಲಿ ನಮಗೆ ಸಿಕ್ಕಿರುವ ಕೆಲವು ವಿಚಿತ್ರ ಚಿತ್ರಗಳು ಮತ್ತು ವಿಶ್ಲೇಷಣೆ:


2.1 ಈ ಭಾಗದಲ್ಲಿ ನಾನು ಉದ್ದೇಶಪೂರ್ವಕವಾಗಿ ಕೆಲವು ಅರೆ-ವೈಜ್ಞಾನಿಕ ಆದರೆ ಯೋಚಿಸಲರ್ಹ ಮಂಗಳ ಗ್ರಹದಲ್ಲಿ ಕಂಡ ಚಿತ್ರಗಳು ಅವುಗಳ ಬಗ್ಗೆ ಜಗತ್ತಿನಲ್ಲಿ ನಡೆಯುತ್ತಿರುವ ಚರ್ಚೆಯ ಬಗ್ಗೆ ದೃಷ್ಟಿ ಹಾಯಿಸುತ್ತೇನೆ. ಮತ್ತೆ ಪೂರ್ಣ ವೈಜ್ಞಾನಿಕ ವಿಚಾರದತ್ತಲೂ ಬರುವೆ, ಸಂಧರ್ಭಕ್ಕೆ ತಕ್ಕಂತೆ.


2.2 ಇವು ಯಾವುವೂ ಯಾವುದೋ ಹುಚ್ಚು ಕಲಾವಿದನೊಬ್ಬನ ಮನಸ್ಸಿನಲ್ಲಿ ಮೂಡಿದ ಕಾಲ್ಪನಿಕ ಚಿತ್ರಗಳಲ್ಲ, ಅಥವಾ ಫೋಟೋಶಾಪ್ ಮಾಡಿ ಸುಳ್ಳು ದಾಖಲೆ ಸೃಷ್ಟಿ ಮಾಡುವ ಉದ್ದೇಶದ ಫೇಕ್ ಚಿತ್ರಗಳೂ ಅಲ್ಲ. ಅಮೆರಿಕನ್ ಉಪಗ್ರಹ ಮತ್ತು ರೋಬೋಟ್ ವಿಶೇಷತಃ, ಇತ್ತೀಚೆಗೆ ಇನ್ನೂ ಅಲ್ಲೇ ಕಾರ್ಯನಿರತವಾಗಿರುವ-ಮಾರ್ಸ್ ಕ್ಯೂರಿಯೋಸಿಟಿ ರೋವರ್ ಎಂಬ ನಾಸಾದ ಸರಕಾರಿ ಅನ್ವೇಷಕ ವಾಹನ ತನ್ನ ಉತ್ಕೃಷ್ಟ ದರ್ಜೆಯ ಕ್ಯಾಮೆರಾದಲ್ಲಿ ತಾನು ಅತ್ತಿದ್ದಿಂತ ತಿರುಗಾಡುವಾಗ ಲೈವ್ ಸೆರೆಹಿಡಿದ ಫೋಟೊಗಳು.



2.3 ಅದರಲ್ಲಿ ಅತ್ಯಂತ ಸೋಜಿಗಕರವಾಗಿ ಕಂಡು ಒಂದು ಹತ್ತು ಚಿತ್ರಗಳು ಮತ್ತು ಚರ್ಚೆ ಬಗ್ಗೆ ನೋಡುವಾ

1.ಮನುಷ್ಯನ ಶಿರದ ಚಿತ್ರಗಳು:


ಈ ಫೋಟೊ ನಕಲಿ, ಇದು ಹೀಗಿಲ್ಲ, ಬೇರೆ ತರಹ ಇದೆ ಎಂದೆಲ್ಲಾ ಕೆಲವು ಕಡೆ ಬಂದಿದೆ. ಇದೇ ಅಮೆರಿಕಾದ ನಾಸಾ ಕಳಿಸಿದ ವೈಕಿಂಗ್ ನೌಕೆ 1976 ರಲ್ಲಿ ಕಳಿಸಿದ ಒರಿಜಿನಲ್ ಚಿತ್ರ. ಮಿಕ್ಕವರು ದಾರಿ ತಪ್ಪಿಸಲು ಅದನ್ನು ತಿದ್ದಿರಲೂ ಬಹುದು, ಗೊತ್ತಿಲ್ಲ



ಇದು ಕಲ್ಲಿನಲ್ಲಿ ಕಡೆದಿದ್ದೋ ಅಥವಾ ಮಮ್ಮಿಯಾಗಿ ಪಳೆಯುಳಿಕೆಯಾಗಿರುವಿದೋ ಗೊತ್ತಿಲ್ಲ. ಮುಖದ ಫೀಚರ್ಸ್, ಕಣ್ಣು ಮೂಗು ಬಾಯಿ ಒಂದು ತರಹ ಕಿರೀಟ ತಲೆಯ ಮೇಲೆ ಇದ್ದಂತಿದೆ.


ಮಂಗಳನಲ್ಲಿ ಹಿಂದೆ ಯಾರೋ ಇದ್ದರಾ? ಇಲ್ಲದಿದ್ದರೆ ನಾವು ಇಷ್ಟೊಂದು ಗುರುತಿಸಲು ಸುಲಭವಾದ, ಸಾಧ್ಯವಾಗುವಂತಾ ಪಳೆಯುಳಿಕೆಗಳು, ಅವಶೇಷಗಳು ಹೇಗೆ ಸಹಜವಾಗಿ ತನ್ನಿಂದ ತಾನೇ ನಿರ್ಮಿತವಾಗಿರಲು ಸಾಧ್ಯ, ಯಾರೂ ಇಲ್ಲದ ನಿರ್ಜನ ಗ್ರಹದಲ್ಲಿ?


ಇದರ ಅಸಲಿ ಸೈಜುಗಳು ನನಗೆ ಸದ್ಯಕ್ಕೆ ಗೊತ್ತಾಗುತ್ತಿಲ್ಲ.


ಆದರೆ ಅಂತಾ ರಾಕ್ಷಸಾಕಾರದ ವಿಗ್ರಹಗಳನ್ನು ಕಡೆದವರು ಸ್ವತಃ ಎಂತಾ ಭೀಮಕಾಯರೋ, ಆಜಾನುಬಾಹುಗಳೋ ಆಗಿದ್ದಿರಬೇಕು?

ಈಗ ಅವರೆಲ್ಲಾ ಯಾಕೆ ಯಾರೂ ಇಲ್ಲ!! ಎಲ್ಲಿ ಹೋದರೋ?

2. ಈಜಿಪ್ಟ್ ತರಹದ ಪಿರಮಿಡ್ಡುಗಳು ಇವೆ!







ಮಂಗಳ ಗ್ರಹದಲ್ಲಿ ಕಂಡಿದ್ದು ಮತ್ತು ಒಳಚಿತ್ರ- ಈಜಿಪ್ಟಿನ ಪಿರಮಿಡ್ ಸ್ಫಿಂಕ್ಸ್ ಹೋಲಿಕೆ ತೋರಿಸಲು ವ್ಯವಸ್ಥಿತವಾಗಿ ಇಷ್ಟೊಂದು ಅಕ್ಕಪಕ್ಕದಲ್ಲಿ ಹೇಗೆ ಯಾರು ಕಟ್ಟಿದ್ದರು ಮಂಗಳ ಗ್ರಹದಲ್ಲಿ?





ಪಿರಮಿಡ್ದುಗಳಿಗೆ ಬಾಗಿಲುಗಳೇ? ಯಾರು ಕಟ್ಟಿದರು, ಏಕೆ?


ನಗರ ರಸ್ತೆ ವ್ಯವಸ್ಥೆಯಂತೆ ನೇರ ಸರಳರೇಖೆಗಳ ಏರ್ಪಾಡು ಏಕಿದೆ? ಹರಪ್ಪಾ ಮೊಹೆಂಝೊದಾರೋ ತರಹವೆ?




ಒಂದು ಈಜಿಪ್ಟಿನ ಪೌರಾಣಿಕ ದಂತಕಥೆಯ ಪ್ರಕಾರ- ಇದ್ದಕ್ಕಿದ್ದಂತೆ ಬಹಳ ನಾಗರೀಕ ಸಮಾಜವೊಂದು ಕಾಣಿಸಿಕೊಂಡು ಊಹಿಸಲಸಾಧ್ಯವಾದ ಪಿರಮಿಡ್ಡು, ಸ್ಫಿಂಕ್ಸ್ ಕಟ್ಟಡಗಳನ್ನು ಕಟ್ಟಿದ್ದೇ...ಆ ಮಂಗಳ ಗ್ರಹದಿಂದ ಬಹಳ ಹಿಂದೆ ಭೂಮಿಗೆ ವಲಸೆ ಬಂದಿದ್ದ ಅಲ್ಲಿನ ಜೀವಿಗಳು. ಅದಕ್ಕೇ ಅಲ್ಲಿನ ಮುಖಗಳ ಕೆತ್ತನೆ ಈಜಿಪ್ಟಿನ ಪುರಾತನ ರಾಜರುಗಳಾದ ಫಾರೋಗಳ ಹೋಲಿಕೆಯಿದೆ ಎನ್ನುತ್ತಾರೆ ಕೆಲವರು ಇದರಲ್ಲಿ ನಂಬಿಕೆ ಉಳ್ಳವರು....ಇದೂ ಸತ್ಯವೇ ಆಗಿದ್ದರೆ?


ಯಾರೂ ಅಂದಿನ ಕಾಲದಲ್ಲಿ ಗಾತ್ರ, ತಂತ್ರಜ್ಞಾನದಲ್ಲಿ ಊಹಿಸಲೂ ಆಗದ ಅದೇ ಬೃಹತ್ ಕಲ್ಲಿನ ಚೂಪಾದ ಕೋನವುಳ್ಳ ಜಾಮಿಟ್ರಿ ಬಾಕ್ಸಿನಿಂದ ಮಾಡಿದಂತಾ ಈ ಪಿರಮಿಡ್ದುಗಳನ್ನೂ ಮಂಗಳ ಗ್ರಹದ ವಂಶಜರೇ ಕಟ್ಟಿರಬಾರದೇಕೆ?

ಇದಕ್ಕೆಲ್ಲಾ ಯಾರೂ ಹೌದು, ಇಲ್ಲ ಎಂದು ಖಚಿತ ಉತ್ತರ ಕೊಡುವವರಿಲ್ಲ, ನಿಜ.


"ಹಾಗಲ್ಲ ಹೀಗಲ್ಲ, ಛೆ, ನಿಮಗೆಲ್ಲೋ ಭ್ರಾಂತು!!" ಎಂದು ಹೀಗೆಳೆದು ನಕ್ಕು ಅಸಡ್ಡೆ ಮಾಡುವುದನ್ನೇ "ವೈಜ್ಞಾನಿಕ ವೈಚಾರಿಕ, ಪ್ರಗತಿಶೀಲ" ಮನೋಭಾವ ಎನ್ನುವ ಪರಿಪಾಠ ಬೆಳೆದುಬಂದಿದೆ.

ಇರಲಿ, ನೋಡುತ್ತಾ ಹೋಗುವಾ...


3. ಕಲ್ಲಿನಲ್ಲಿ ಕಂಡ ಈಜಿಪ್ಟಿನ ರಾಜನ ವಿಗ್ರಹದ ನಕಲು ಅಲ್ಲಿದೆ




ಬೆಟ್ಟದಲ್ಲೊಂದು ಅಲ್ಲಿ ಕಂಡಿತ್ತು- ಈಜಿಪ್ಟಿನ ರಾಜಮನೆತನದವರ ಶವಗಳ ಕಲ್ಲಿನ ಕಾಫಿನ್ ಗೆ ಸಾರ್ಕೋಫೇಗಸ್ ಎನ್ನುತ್ತಾರಲ್ಲ. ಅಂತಹದ್ದು ಪ್ರತಿರೂಪ ಮಂಗಳ ನಿರ್ಜನ ಬೆಟ್ಟದ ಮುಖದಲ್ಲಿ ಕೆತ್ತಿದಂತೆ ಕಾಣುತ್ತಿದೆ. ಈತನನ್ನು ಕಿಂಗ್ ಟುಟ್ ಎಂದು ಈಜಿಪ್ಟಿನವರು ಕರೆಯುತ್ತಾರೆ.

ಹೌದೆ? ನಮಗೆ ತಿಳಿದ ಸಾರ್ಕೋಫೇಗಸ್ ಈ ರೀತಿ ಕೆಳಗಿನ ಕಲರ್ ಚಿತ್ರ ನೋಡಿ ಇದೆ:




ಈಗ ಹೇಳಿ- ಅಲ್ಲಿನದಕ್ಕೂ ಇದಕ್ಕೂ ಸ್ವಲ್ಪವೂ ಹೋಲಿಕೆಯಿಲ್ಲವೆ ಎಂದು ಕೇಳುತ್ತಾನೆ ಜನಪ್ರಿಯ ರಹಸ್ಯ ಮತ್ತು ಪಿತೂರಿ ಅನ್ವೇಷಕ ಸ್ಕಾಟ್ ಸಿ ವೇರಿಂಗ್. ಆತನ ವೆಬ್ ಸೈಟ್, ಯೂ ಟ್ಯೂಬ್ ಎಲ್ಲಾ ಇದೆ. ಸಮಯ ಆಸಕ್ತಿಯಿದ್ದರೆ ಭೇಟಿ ಕೊಟ್ಟು ನೋಡಿ. ಹಾ, ಆತನನ್ನು ನಂಬುವವರೂ ಸಹಸ್ರಾರು ಫ್ಯಾನ್ಸ್ ಇದ್ದಾರೆ

ಅವನಿಗೆ ತವಲು, ಹುಚ್ಚು ಎಂದು ತಿರಸ್ಕಾರ ಮಾಡುವ ವಿಜ್ಞಾನಿಗಳೂ ಇದ್ದಾರೆ. ಆಯ್ಕೆ ನಿಮ್ಮದು! ಅವನ ಯೂಟ್ಯೂಭ್ ವಿಡಿಯೋ ಚಾನೆಲ್ ಲಿಂಕ್ ಇದೆ. ಒಮ್ಮೆ ನೋಡಿ... 7 ನಿಮಿಷ ಮಾತ್ರ


6. ಸ್ಫಿಂಕ್ಸ್ ತರಹದ ಅವಶೇಷ, ಇದು ಅದಲ್ಲ ಇದಲ್ಲ ಎನ್ನುವ ವಿಜ್ಞಾನಿಗಳು ಮತ್ತೆ ಏನಿದು ಎಂದರೆ ಉತ್ತರಿಸುವುದಿಲ್ಲ...ಏಕೆ?




7. ಇದ್ಯಾರೋ ಕುಳಿತಂತಿದೆಯಲ್ಲ, ಸ್ವಲ್ಪ ನೋಡಿ ದಿಟ್ಟಿಸಿ:




ಇದೂ ಸಹಾ ಉಪಗ್ರಹ ಅಮೆರಿಕಾ ನಾಸಾ ಕೇಂದ್ರಕ್ಕೆ ಬೀಮ್ ಮಾಡಿರುವ ಅಸಲಿ ಚಿತ್ರ.


ಪಾಪ, ಅಮೆರಿಕಾದವರ ಉಪಗ್ರಹದ ಕ್ಯಾಮರಾ ಸಹಾ ಇಷ್ಟು ಚೆನ್ನಾಗಿ ಊಹೆ, ಕಲ್ಪನೆ ಮಾಡಿಕೊಳ್ಳುತ್ತದೋ ಏನೋ?... ಯಾರಿಗೂ ಗೊತ್ತಿಲ್ಲ!

5. ಇಲ್ಲೊಂದು ಕಲ್ಲಿನ ಕಟ್ಟಡ ಇದ್ದಂತೆ ಕಾಣುತ್ತಿದೆ, ಬಾಗಿಲಿನ ಸಮೇತ. ಅಲ್ಲ ಎಂದರೆ ಬಿಡಿ...!





6. ಆಧುನಿಕ ವಾರ್ ಟ್ಯಾಂಕ್ ಈಗ ಫಾಸಿಲ್ - ಪಳೆಯುಳಿಕೆ ಆಗಿದೆ ಎನ್ನುತ್ತಾರೆ ಮಾರ್ಸ್ ವಾದಿಗಳು. ನೀವೂ ನೋಡಿ.

"ಇಲ್ಲ ಹಾಗೆ ಸುಮ್ಮನೆ ಸಹಜವಾಗಿ ಕಲ್ಲು ಆಗಿದೆ" ಎನ್ನುತಾರೆ ಸರಕಾರಿ ಮೂಲದ ವಿಜ್ಞಾನಿಗಳು.

ಇದೆಂತಹಾ ವೈಜ್ಞಾನಿಕ ವಿವರಣೆಯೋ ನನಗಂತೂ ತಿಳಿದಿಲ್ಲ





7. ಇನ್ನೂ ಕೆಲವು ಕಟ್ಟಡಗಳು, ಊರುಗಳು, ನಾಗರೀಕತೆ ಚಿತ್ರಗಳು? ಏನಿವು?




ಅದನ್ನೆ ದೊಡ್ಡದಾಗಿಸಿ ನೋಡಿ:


ಪಿರಮಿಡಿನಿಂದ ಉದ್ದನೆಯ ಸುರಂಗ, ಪ್ಯಾಸೆಜ್ ಅಲ್ಲಿಂದ ಚೌಕಾಕಾರದ ಕಟ್ಟಡ. ಇದು ಹೇಗೆ ಬಂತು ನಿರ್ಜನ ಮಂಗಳ ಗ್ರಹದಲ್ಲಿ?





8 ಮುರಿದು ಬಿದ್ದ ಕಟ್ಟಡದ ಚೂರು? ಬಹಳವೇ ಕುತೂಹಲಕಾರಿ, ವಿಚಿತ್ರ ಕೆತ್ತನೆ. ಸಹಜವಾಗಿ ಹೀಗೆಲ್ಲಾ ಇರಲು ಸಾಧ್ಯವೆ?





9. ಫಳ ಫಳ ಹೊಳೆಯುವ ಗೋಲ ಚೆಂಡು...ಗುಂಡು... ಖಂಡಿತಾ ಯಾರೋ ಮಾಡಿರುವುದು ತಾನೆ?




10. ಅಸ್ತಿಪಂಜರವೆ ಇದು ಪ್ರಾಣಿಯದು?



ಇದೇನು ದೊಡ್ಡ ಚಮಚದಂತಿದೆಯಲ್ಲಾ?



ಇದೆಲ್ಲಾ ನೋಡಿದರೆ ಸಾಮಾನ್ಯರಿಗಾದರೂ ಯಾವುದೋ ಗತಕಾಲದ ವೈಭವದ ಸುಳಿವುಗಳು ಎನಿಸುವುದಿಲ್ಲವೆ?


ಈ ಅಧ್ಯಾಯದ ಕೊನೆಯ ಮಾತು:


ಮಂಗಳನಲ್ಲಿ ಹಿಂದೊಮ್ಮೆ ಕೋಟ್ಯಂತರ ವರ್ಷದ ಕೆಳಗೆ ಯಾರಾದರೂ ಇದ್ದವರಾದರೆ... ನಮ್ಮ ಶಿಲಾಯುಗದ ಆದಿಮಾನವರಷ್ಟು ಹಿಂದುಳಿದ ದುರ್ಬಲರಂತೆ ಅಂತೂ ಕಾಣುತ್ತಿಲ್ಲ ಬಿಡಿ. ಯಾರೋ ಬಹಳ ಆಧುನಿಕವಾಗಿದ್ದ ಮುಂದುವರೆದ ಜನಾಂಗ, ಸಮಾಜ ಎಲ್ಲಾ ಕಟ್ಟಿಕೊಂಡು ಬಾಳಿ ಬದುಕಿ ಕೊನೆಗೆ ಎಲ್ಲೋ ನಾಶವಾಗಿ ಹೋದಂತೆ, ಈಗ ಮಂಗಳ ಗ್ರಹ ತನ್ನ ಹಳೆಯ ವಾತಾವರಣ, ಪ್ರಕೃತಿ, ನಾಗರೀಕತೆ ಎಲ್ಲಾ ಕಳೆದುಕೊಂಡು ಸ್ಮಶಾನ ಸದೃಶವಾಗಿ ಪಾಳಾಗಿ ನಿರ್ಜನವಾಗಿ ಬಿದ್ದಿದೆ ಎನ್ನುತ್ತಾರೆ ಹಲವು ಉತ್ತಮ ಹಿಸ್ಟರಿ, ಆರ್ಕಿಯಾಲಿಜಿ ಮತ್ತು ಮಾನವಶಾಸ್ತ್ರ ಬಲ್ಲ ಪ್ರೊಫೆಸರುಗಳು ಮತ್ತು ಸಂಶೋಧಕರು.


ಇಲ್ಲಿದ್ದವರು ಯಾವುದೋ ಭಯಂಕರವಾದ, ಹಿಂತಿರುಗಿ ಬರಲಾಗದಂತಾ ದುರಂತ ಮಾಡಿಕೊಂಡರೋ ಏನೋ!

ಅದೊಂದು ಹಾಳು ಹಂಪೆಯಾಯಿತೆ? ಶಿಥಿಲವಾದ ಕೊಂಪೆಯಾಯಿತೆ... ಏಕೋ?


ಈಗಂತೂ ಮಿಲಿಯನ್ ಗಟ್ಟಲೆ ದುಡ್ಡು ಖರ್ಚು ಮಾಡುತ್ತಾ ಅಮೆರಿಕಾ, ಚೀನಾ, ಯುರೋಪ್, ಅಷ್ಟೇಕೆ ನಮ್ಮ ಭಾರತದಂತ ಬಡ ದೇಶ ಸಹಾ- ಮಂಗಳ ಅಂದರೆ ಅದೇನೋ ಸಾಫ್ಟ್ ಕಾರ್ನರ್ ಇಟ್ಟುಕೊಡು ಮತ್ತೆ ಮತ್ತೆ ಅಲ್ಲಿಗೆ ಹೋಗುತ್ತಿರುವುದೇಕೆ, ಪ್ರಯತ್ನಿಸುತ್ತಿರುವುದೇಕೆ? ಬರೇ ಅದೇ ಕಲ್ಲು ಮಣ್ಣು ಬಂಡೆಗಳನ್ನು ಪ್ರತಿಸಲವೂ ಸ್ಟಡಿ ಮಾಡಲಿಕ್ಕೆ ಮಾತ್ರವೆ?... ಹಾಗೆಂದು ನೀವು ನಂಬುವುದಾದರೆ ಧಾರಾಳವಾಗಿ ನಂಬಿ.


ಒಂದು ಮಾತಂತೂ ನಿಜ-


ನಾವು ಈಗ ಅಲ್ಲಿಗೆ ಉಪಗ್ರಹ ರೋಬೋಟ್ ಎಲ್ಲಾ ಕಂಡುಹಿಡಿದು ಗಗನಯಾನ ಮಾಡಿಕೊಡು ಹೋಗಬಲ್ಲೆವರಾದರೆ, ಅಲ್ಲಿನವರೂ ಒಮ್ಮೆ ಬಂದಿರಬಹುದಲ್ಲ ಇಲ್ಲಿಗೆ? ಅಥವಾ ಅಲ್ಲೇ ಇದ್ದಿರಲೂ ಬಹುದಲ್ಲ? ನಮಗೆ ಮಾತ್ರ ಈ ವಿಶೇಷ ಜ್ಞಾನ, ವಿಜ್ಞಾನ ಸಿಕ್ಕಿದೆ ಎನ್ನಲು ಯಾವ ಸಾಕ್ಷಿ ಪುರಾವೆ ಇದೆ?... ಯಾವುದೂ ಇಲ್ಲ!

ನಮಗೆ ಅನ್ಯರ ಬಗ್ಗೆ ಗೊತ್ತಿಲ್ಲ ಎನ್ನುವುದನ್ನು ಬಿಟ್ಟರೆ!


·ಇವತ್ತು ಯು ಎ ಇ ದೇಶದ ಮಾರ್ಸ್ ಉಪಗ್ರಹ ನೌಕೆ “ಹೋಪ್” ಮಂಗಳನ ಕಕ್ಷೆ ತಲುಪಿ ಅಲ್ಲಿಂದ ಹೈ ರೆಸಲ್ಯೂಶನ್ ಚಿತ್ರಗಳನ್ನು ಸೆರೆ ಹಿಡಿಯಲಿದೆ ಎಂಬ ಸುದ್ದಿ ಬಂದಿದೆ

·ಯು ಎ ಇ ಈಗ ಮೊದಲ ಅರಬ್ ದೇಶ ಈ ಸಾಧನೆಯನ್ನು ಮಾಡಿದ ಕೀರ್ತಿ ಪಡೆದಿದೆ.



ಮುಂದಿನ ಕಂತಿನಲ್ಲಿ: ಇನ್ನೂ ಹೆಚ್ಚು ಮಂಗಳ ಗ್ರಹದ ಇತಿಹಾಸ, ಅಲ್ಲೇನು ನಡೆದಿರಬಹುದು, ಈಗೇಕೆ ಹೀಗಾಗಿದೆ ಮುಂದೆ ನಾವೇನು ಮಾಡಬಹುದು ಇತ್ಯಾದಿ



87 views0 comments

תגובות


bottom of page