Search

Mysore- Sringeri- Dharmasthala- Kukke Subramanya Pilgrimage tour- Kannada

ಮೈಸೂರು- ಶೃಂಗೇರಿ- ಧರ್ಮಸ್ಥಳ- ಕುಕ್ಕೆ ಸುಬ್ರಮಣ್ಯ 5-ದಿನ ಯಾತ್ರೆ – ಚಿಕ್ಕ ವರದಿ:

ಚೆನ್ನೈನಲ್ಲಿರುವ ಶೃಂಗೇರಿ ಶಂಕರ ಮಠದ ಒಂದು ಚಿಕ್ಕ ಸಮಾನ-ಮನಸ್ಕರ ಗುಂಪು- ಅಭಿನವ ಭಾರತಿ ಸತ್ಸಂಗದ ಸದಸ್ಯನಾದ ನಾನು ಸುಮಾರು 75 ಸದಸ್ಯರೊಂದಿಗೆ 24 ರಂದು ಶತಾಬ್ದಿ ಎಕ್ಸ್ಪ್ರೆಸ್ಸಿನಲ್ಲಿ ಹೊರಟು ಮೈಸೂರು ತಲುಪಿದೆವು. ಸಂತಸ- ಸಂಗೀತದ ಪ್ರಜ್ಞೆಯುಳ್ಳ ನಾವು ಚಿತ್ರಗೀತೆ-ಭಕ್ತಿಗೀತೆ( ತಮಿಳು- ಕನ್ನಡ – ಹಿಂದಿ ಭಾಷೆಗಳಲ್ಲಿ) ಹಾಡುತ್ತಾ ಉದ್ದಕ್ಕೂ ನಲಿದೆವು.

ಪ್ರವಾಸದ ಮುಖ್ಯಾಂಶಗಳು: 1. ಮೈಸೂರಿನಲ್ಲಿ ಕೆ ಎಸ್ ಟಿ ಡಿ ಸಿ ವೋಲ್ವೋ ಬಸ್‌ಗಳು ನಮಗೆ ಲಭ್ಯ, ಮಯೂರ ಯಾತ್ರಿನಿವಾಸದಲ್ಲಿ ಇಳಿದು ಫ್ರೆಶ್ -ಅಪ್ ಆಗಿ ಮೊದಲಿಗೆ ಸಮಯಪುರಂ ಮಾರಿಯಮ್ಮ ದೇವಸ್ಥಾನದ ಹೊಸ ಕಟ್ಟಡ ವೊಂದು ನಿಮಿಷಾಂಭ ದೇವಾಲಯದ ಬಳಿ ಬರುತ್ತಿದೆ, ಅಲ್ಲಿಗೆ ಭೇಟಿಯಿತ್ತು ಅಲ್ಲಿಂದ ಮೇಲುಕೋಟೆಗೆ ತೆರಳಿದೆವು.

2. ಮೇಲುಕೊಟೆಯಲ್ಲಿ ಪ್ರಧಾನ ಅರ್ಚಕರ ಸಹಕಾರದಿಂದ ಚೆಲುವನಾರಾಯಣನ ದರ್ಶನ ಮುಗಿಸಿ , ಬೆಟ್ಟದ ಯೋಗಾನರಸಿಂಹ ಗುಡಿಗೆ ಆಟೋದಲ್ಲಿ ಅರ್ಧ ರಸ್ತೆ ಸವೆಸಿ ಅಲ್ಲಿಂದ ಮೇಲೆ ಹತ್ತಿ ದರ್ಶನ ಮಾಡಿ ಬಂದೆವು.

3. ಅಲ್ಲಿ ಅಯ್ಯಂಗಾರ್ ಪದ್ಧತಿಯ ರಸಕವಳ ಸವಿದು ನೇರ ನಂಜನಗೂಡಿಗೆ ಪ್ರಯಾಣ. ಅಲ್ಲಿ ಶ್ರೀಕಂಠೇಶ್ವರನ ಅಭಿಷೇಕ/ ದರ್ಶನಕ್ಕೆ ವಿಶೇಷ ಸಾಲಿನಲ್ಲಿ ಹೋಗಿ ದರ್ಶನ ಲಭ್ಯ. 4. ರಾತ್ರಿ ವಿ. ವಿ. ಮೊಹಲ್ಲಾದಲ್ಲಿರುವ ಸರವಣ ಭವನದಲ್ಲಿ ಭೋಜನ, ಮಯೂರ ಯಾತ್ರಿನಿವಾಸದಲ್ಲಿ ರಾತ್ರಿ ಹಾಲ್ಟ್.

5. ಮುಂಜಾನೆ ಎದ್ದು ತಿಂಡಿ ಮುಗಿಸಿ ಹಾಸನ ಮಾರ್ಗವಾಗಿ ಶೃಂಗೇರಿಗೆ ಪ್ರಯಾಣ. ಅಲ್ಲಿ ಮೊದಲೇ ಬುಕ್ ಮಾಡಿದ್ದ ವಸತಿ ಗೃಹದಲ್ಲಿ ಇಳಿದು ಮಠದಲ್ಲಿ ನಮಗಾಗಿ ಪ್ರತ್ಯೇಕ ಭೋಜನಶಾಲೆಯಲ್ಲಿ ಅಡಿಗೆ ಸವಿದು ಬೆಳಿಗ್ಗೆ ಶಾರದಾಂಬೆಯ ದರ್ಶನ ನಂತರ ಗುರು ನಿವಾಸದಲ್ಲಿ ನಮ್ಮ ಪ್ರತ್ಯೇಕ ದರ್ಶನ ಕಾರ್ಯಕ್ರಮವಿತ್ತು. ಮಠಕ್ಕೆ ಹತ್ತಿರದವರಾದ ನಮ್ಮ ನಾಯಕರ ವತಿಯಿಂದ ಶ್ರೀ ಶ್ರೀ ಭಾರತೀತೀರ್ಥ ಮತ್ತು ವಿಧುಶೇಖರ ಭಾರತಿಯವರ ಸನ್ನಿಧಿಯಲ್ಲಿ ಪಾದುಕಾ ಪೂಜೆ, ಇಂಟರ್ವ್ಯೂ, ಸದಸ್ಯರ ಪರಿಚಯ, ಗುರುಗಳಿಂದ ಆಶೀರ್ವಾದ, ಅವರಿಗೆ ಕಾಣಿಕೆ ಮತ್ತು ನಮಗೆ ಗೌರವಕ್ಕಾಗಿ ಶಾಲು+ ಸೀರೆ ಇತ್ತು ಸನ್ಮಾನ, ಜಗದ್ಗುರುಗಳ ಆಶೀರ್ವಚನ ಭಾಷಣ ಎಲ್ಲಾ ಬಹಳ ವಿಜೃಂಭಣೆಯಿಂದ ನೆಡೆಯಿತು. ಎಲ್ಲರೂ ನಮಗಾಗಿ ಪ್ರತ್ಯೇಕವಾಗಿ ಏರ್ಪಡಿಸಿದ್ದ ಮಲೆನಾಡಿನ ರುಚಿಯ ಭೋಜನವನ್ನು ಸವಿದೆವು.

6. ಮಾರನೇ ದಿನ ನಮಗೆ ಬೆಳಿಗ್ಗೆ ತಿಂಡಿ ನಂತರ ಧರ್ಮಸ್ಥಳಕ್ಕೆ ಪ್ರಯಾಣ. ಅಲ್ಲಿ ವೀರೆಂದ್ರ ಹೆಗ್ಗಡೆಯವರಿಗೆ ಆಪ್ತರೊಬ್ಬರು ನಮ್ಮನ್ನು ಶ್ರೀ ಹೆಗ್ಗಡೆಯವರನ್ನು ಖುದ್ದಾಗಿ ಭೇಟಿ ಮಾಡಿ ಅವರೊಂದಿಗೆ 15 ನಿಮಿಶ ಪರಸ್ಪರ ಮಾತು ಕತೆ, ಚಿಕ್ಕ ಭಾಷಣ ಎಲ್ಲವೂ ಅವರ ನಿವಾಸದಲ್ಲಿ ಅಪೂರ್ವವಾದ ಅನುಭವ ನೀಡಿತು. ಮಂಜುನಾಥನ ದರ್ಶನಕ್ಕೂ ವಿಶೇಷ ಸಾಲಿನ ವ್ಯವಸ್ಥೆ. ಅಲ್ಲಿನ ರುಚಿಕರ ಭೋಜನಾನಂತರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಪಯಣ. ಸಂಜೆ ಅಲ್ಲಿ ( ನಮಗೆ ಮನೆದೇವರು) ಸುಬ್ರಹ್ಮಣ್ಯನ ದರ್ಶನ.

7.ಹಾಸನದ ಹೋಟೆಲ್ ರಾಮ ತಲುಪಿದಾಗ ರಾತ್ರಿ 10. ಅಲ್ಲಿ ಲೇಟ್ ಊಟ. ನಂತರ ವಿರಾಮ. ವಾಪಸ್ ಮೈಸೂರಿಗೆ ಪಯಣ. ನಿಮಿಷಾಂಭ ದೇವಿ ದರ್ಶನ, ಕಾವೇರಿ ಜಲಸ್ಪರ್ಷ! 8. ಮಧ್ಯಾಹ್ನ 2-15ಕ್ಕೆ ಶತಾಬ್ಧಿ ಹಿಡಿದು ಮತ್ತೆ ಚೆನ್ನೈಗೆ ಪಯಣ. ಮನೆ ತಲುಪಿದಾಗ ರಾತ್ರಿ 11.15 ಕೆಲವು ಚಿತ್ರಗಳನ್ನು ಇಲ್ಲಿ ಲಗತ್ತಿಸಿದ್ದೇನೆ, ನಂತರ ಸವಿವರ ಇಂಗ್ಲೀಶ್ ಬ್ಲಾಗ್ ಬರೆಯುವೆ..

ತಾಳ್ಮೆಯಿಂದ ಓದಿದ ನಿಮಗೆ ಧನ್ಯವಾದಗಳು.

1 view0 comments

© 2020 by Nagesh Kumar CS . Proudly created with Wix.com

This site was designed with the
.com
website builder. Create your website today.
Start Now