Author Dan Brown – Introduction In Kannada

ಡ್ಯಾನ್ ಬ್ರೌನ್ -Da Vinci Code ಬಿಡಿಸಿದ ಐತಿಹಾಸಿಕ ಥ್ರಿಲ್ಲರ್ ಲೇಖಕ : ಮುಂದೆ ಓದಿ… ~~~~~~~~~~~~~~~~~~~~~~~~~~~~~~~~~~~~~~~~~~~


“ಡ ವಿಂಚಿ ಕೋಡ್ ಸಿನೆಮಾ” ( The Da Vinci Code: ) ಎಂದ ತಕ್ಷಣ ನಗರವಾಸಿ ಆಂಗ್ಲ ಚಲನಚಿತ್ರಪ್ರಿಯರೆಲ್ಲಾ ” ನಾನು ನೋಡಿದ್ದೇನೆ” ಎಂದು ಕೈಯೆತ್ತುತ್ತಾರೆ..ಅಂತಾ ವಿಶ್ವವಿಖ್ಯಾತ ಚಿತ್ರದ (Thriller, Historical, Da Vinci Code) ಜೀವಾಳ ಡ್ಯಾನ್ ಬ್ರೌನ್ ಎಂಬ ಜಾದೂ ಸಂಚಲನ ಮೂಡಿಸಿದ ಇತ್ತೀಚಿನ ಕತೆಗಾರರು. ೧೯೯೦ ರ ದಶಕದಲ್ಲಷ್ಟೇ ಬರಹವನ್ನು ಕೈಗೆತ್ತಿಕೊಂಡ ಬ್ರೌನ್ ಮೊದಲು ಕಾಲೇಜಿನಲ್ಲಿ ಸಂಗೀತದ ಒಲವಿನಿಂದ ಗೀತ ರಚನೆಯ ವ್ಯಾಸಂಗ ಮಾಡಿ ಸಂಗೀತಗಾರರಾದ ಅಮೆರಿಕನ್. ೧೯೯೩ ರಲ್ಲಿ ಇನ್ನೊಬ್ಬ ಅಪ್ರತಿಮ ಕಾದಂಬರಿಕಾರ ಸಿಡ್ನಿ ಶೆಲ್ಡನ್ ಎಂಬವರ ಥ್ರಿಲ್ಲರ್- ಡೂಮ್ಸ್ ಡೇ ಕಾನ್ಸ್ಪಿರೆಸಿ ಓದಿ ತಾನೂ ಇಂತಾ ಲೇಖಕನಾಗಬೇಕೆಂದು ತೀರ್ಮಾನಿಸಿದರು ೧೯೯೮ ರಲ್ಲಿ ಇವರ “ಡಿಜಿಟಲ್ ಫ಼ೋರ್ಟ್ರೆಸ್ಸ್” ಎಂಬ ಒಂದು ಸೂಪರ್ ಕಂಫ್ಯೂಟರ್ ಮತ್ತು ಅದರಲ್ಲಿದ್ದ ಡೇಟಾ ಸೋರಿಕೆ, ವರ್ಮ್, ಹ್ಯಾಕರ್ಸ್ ಇತ್ಯಾದಿಯ ಬಗ್ಗೆ ಒಂದು ರೋಮಾಂಚಕ ಕಥಾವಸ್ತು ಉಳ್ಳ ಕಾದಂಬರಿ ಬಿಡುಗಡೆಯಾಯಿತು. ಆಂಗ್ಲ ಕಾದಂಬರಿ ಸಾಹಿತ್ಯದಲ್ಲಿ ಅಂದೇ ಹೊಸ ಯಶಸ್ವೀ ಥ್ರಿಲ್ಲರ್ ಲೇಖಕನೊಬ್ಬನ ಉದಯವಾಗಿತ್ತು. ಇವರ ಯಶಸ್ಸಿಗೆ ಇವರ ಪತ್ನಿಯ ಅವಿರತ ಪ್ರಯತ್ನವು ಕಾರಣವಾಯಿತು. ಹಿನ್ನೆಲೆಯಲ್ಲೆ ಆಕೆ ಪತಿಯ ಲೇಖನಗಳನ್ನು ಪ್ರೋತ್ಸಾಹಿಸಿದರು, ಮುಂದೆ ತಂದರು. ಇವರ ಎರಡನೇ, ಮೂರನೇ ಕಾದಂಬರಿಗಳಾದ “ಏಂಜೆಲ್ಸ್ ಅಂಡ್ ಡೆಮನ್ಸ್ ” ಮತ್ತು “ಡಿಸೆಪ್ಷನ್ ಪಾಯಿಂಟ್ ” ಮೊದಲಿಗೆ ಸುಮಾರಾದ ಯಶಸ್ಸನ್ನಷ್ಟೇ ಕಂಡವು. ಡ್ಯಾನ್ ಬ್ರೌನ್ ರವರ ನಾಲ್ಕನೇ ಕಾದಂಬರಿ ೨೦೦೩ ರಲ್ಲಿ “ದ ಡವಿಂಚಿ ಕೋಡ್” ಪ್ರಕಟವಾಗಿದ್ದೆ ಸರಿ… ಇದ್ದಕ್ಕಿದ್ದಂತೆ ಐತಿಹಾಸಿಕ ಕಥಾನಕ, ರಹಸ್ಯ, ಸಂಚು ಮತ್ತು ಚರಿತ್ರೆಯಲ್ಲಿ ನಗರದ ಮೂಲೆಮೂಲೆಗಳೆಲ್ಲೆಲ್ಲೋ ಹುದುಗಿಹೋಗಿದ್ದ ಜಾನಪದ/ ಕಲಾತ್ಮಕ ಸುಳಿವುಗಳ ವಸ್ತುವುಳ್ಳ ಉಸಿರು ಬಿಗಿಹಿಡಿಯುವಂತಾ ವೇಗದ ಕಾದಂಬರಿಯಾಗಿ ಅದು ಹೊರಬಂದು, ಅಂತರರಾಷ್ಟ್ರೀಯ ಸಾಹಿತ್ಯ ಲೋಕವನ್ನೇ ತನ್ನೆಡೆಗೆ ಒಮ್ಮೆಲೆ ಜಗ್ಗಿತು. ಈ ಕಾದಂಬರಿಯ ಯಶಸ್ಸಿನ ನಂತರ ಅವರ ಮಿಕ್ಕ ಮೂರು ಕಾದಂಬರಿಗಳೂ ಬಿರುಸಾಗಿ ಮಾರಾಟವಾಗಿ ಜನಪ್ರಿಯಗೊಳ್ಳತೊಡಗಿದವು. ಡ್ಯಾನ್ ತಮ್ಮ ಕಾದಂಬರಿಗಳಲ್ಲಿ ಚಾರಿತ್ರಿಕ , ರಾಜಕೀಯ, ಕ್ರಿಶ್ಚಿಯನ್ ಪುರಾಣ, ಕಲೆ, ಪುರಾತನ ವಿಜ್ಞಾನ, ಬಗೆಹರಿಯದ ವಿವಾದಾಸ್ಪದ ರಹಸ್ಯಗಳು ಎಲ್ಲವನ್ನೂ ಅತ್ಯಂತ ಚಾಣಾಕ್ಷತನದಿಂದ ಬೆರೆಸಿ ಎಲ್ಲರೂ ಬೆರಗಾಗುವಂತೆ ಬರೆಯಬಲ್ಲ ಕತೆಗಾರರಾಗಿ ಗುರುತಿಸಿಕೊಂಡರು. ಇವರದೇ ಒಂದು ಶಕೆ ಶುರುವಾಗಿಬಿಟ್ಟಿತು. ದ ಡವಿಂಚಿ ಕೋಡ್ ಪುಸ್ತಕ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದರಿಂದಲೇ ಅಂದಾಜು ೨೫ ಕೋಟಿ ಡಾಲರ್ ಸಂಪಾದಿಸಿದರೆಂದರೆ ಇವರ ಅಭೂತಪೂರ್ವ ಯಶಸನ್ನು ಲೆಕ್ಕ ಹಾಕಿಕೊಳ್ಳಿ ಇವರ ನಾಯಕನಾಗಿ ಒಟ್ಟು ಮೂರು ಕಾದಂಬರಿಗಳಲ್ಲಿ ಪ್ರೊ|| ರಾಬರ್ಟ್ ಲ್ಯಾಂಗ್‌ಡನ್ ಎಂಬ ಮಧ್ಯವಯಸ್ಕ ಮೇಧಾವಿ ನಾಯಕನಿರುತ್ತಾನೆ, ಅವನಿಗೆ ವಿಶ್ವದ ದುರಂತಗಳೇ ಸಾಲು ಸಾಲಾಗಿ ಎದುರಾಗುವಂತಾ ಸನ್ನಿವೇಶಗಳು..ಆತನು ಓರ್ವ ಜಾಣ ಹೆಣ್ಣು ಸಹಾಯಕಿಯ ಬೆಂಬಲದಲ್ಲಿ ಓಡೋಡಿ ಸಾಹಸ ಮಾಡಿ, ಕೊನೆಯ ಪುಟದಲ್ಲಿ ಸಂಚುಕಾರರನ್ನು ಅವರ ವಿದ್ವಂಸಕ ಕೃತ್ಯಗಳನ್ನು ಮಾಡದಂತೆ ಸೋಲಿಸುವುದು , ಇವೆಲ್ಲ ಓದುತ್ತಾ ಇವನೊಬ್ಬ “ಎಲ್ಲಾ ತಿಳಿದ ಜಾಣ, ಬುದ್ದಿಶಾಲಿ ಜೇಮ್ಸ್ ಬಾಂಡ್ ” ಎಂದು ಓದುಗರು ಗುರುತಿಕೊಳ್ಳುವಂತಾಯಿತು. ಅನಂತರ ಇತ್ತೀಚಿನ ಲಾಸ್ಟ್ ಸಿಂಬಲ್ ಮತ್ತು ಇನ್ಫ಼ರ್ನೋ ಎಂಬ ಪ್ರೊ||ಲ್ಯಾಂಗ್‍ಡನ್ ಸರಣಿ ಕಾದಂಬರಿಗಳೂ “ಬೆಸ್ಟ್ ಸೆಲ್ಲರ್” ಎಂಬ ಹಣೆಪಟ್ಟಿ ಹೊತ್ತೇ ಮಾರಾಟಕ್ಕಿಳಿದವು..ಹಾಗಿದೆ ಡ್ಯಾನ್ ಬ್ರೌನ್ ಹಾಕಿದ ಮೋಡಿ. ಇದೇ ಡ್ಯಾನ್ ಬ್ರೌನ್ ಕಂಡ ಯಶಸ್ಸನ್ನು ತನ್ನ ಬುಟ್ಟಿಗೆ ಹಾಕಿಕೊಂಡ ಹಾಲಿವುಡ್ ಚಿತ್ರರಂಗವು ಟಾಮ್ ಹ್ಯಾಂಕ್ಸ್ ಎಂಬ ಮೊದಲ ಶ್ರೇಯಾಂಕದ ನಾಯಕನಿಗೆ ಪಾತ್ರ ಕೊಟ್ಟು ಮೂರು “ಸೀಕ್ವೆಲ್” ಚಿತ್ರಗಳನ್ನೂ ಬಿಡುಗಡೆ ಮಾಡಿದ್ದು, ಈಗ ಬಾಕ್ಸ್ ಆಫೀಸ್ ನಲ್ಲಿ ಅವೂ ವಿಜೃಂಬಿಸಿವೆ. ಕಾದಂಬರಿಗಳಲ್ಲಿ, ನನ್ನ ಖಾಸಗಿ ರೇಟಿಂಗ್ ಕೇಳಿದರೆ: ಡಿಜಿಟಲ್ ಫ಼ೋರ್ಟ್ರೆಸ್ಸ್- ೪/೫ ಏಂಜೆಲ್ಸ್ ಅಂಡ್ ಡೆಮನ್ಸ್, ಡಿಸೆಪ್ಶನ್ ಪಾಯಿಂಟ್-೩.೫/೫ ಡ ವಿಂಚಿ ಕೋಡ್-೪.೫/೫ ಮಿಕ್ಕ ಎರಡು, ಲಾಸ್ಟ್ ಸಿಂಬಲ್ ಮತ್ತು ಇನ್ಫ಼ರ್ನೋ= ೩/೫ ಇನ್ನೂ ಈ ವರ್ಷದಲ್ಲೊಂದು ಕಾದಂಬರಿ ಬರುತ್ತಿದೆಯೆಂದು ಅನಧಿಕೃತ ಸುದ್ದಿ! ಕನ್ನಡದಲ್ಲಿ ಕೆ ಎನ್ ಗಣೇಶಯ್ಯನವರ ಕತೆಗಳನ್ನು ಓದಿ ಆಸಕ್ತಿ ಬಂದವರಿಗೆ , ಡ್ಯಾನ್ ಬ್ರೌನ್ ಆಂಗ್ಲದಲ್ಲಿ ರಸದೌತಣ ನೀಡುವುದರಲ್ಲಿ ಸಂದೇಹವಿಲ್ಲ. ಇವರ ಕಾದಂಬರಿಗಳ ಕನ್ನಡ ಅನುವಾದಗಳೂ ಅಧಿಕೃತವಾಗಿ ಆದಂತಿಲ್ಲ.

43 views

FOLLOW ME

  • Facebook Social Icon
  • Twitter Social Icon
  • YouTube Social  Icon