ನನ್ನ ಪುಸ್ತಕಗಳು

 

ನಾನು ನಾಲ್ಕು ಕಾದಂಬರಿಗಳು ಹದಿಮೂರು ಸಣ್ಣಕತೆ ಮತ್ತು ಒಂದು ನೀಳ್ಗತೆಯನ್ನು ನಾಡಿನ ಪ್ರಸಿದ್ಧ ವಾರಪತ್ರಿಕೆ ಮತ್ತು ಮಾಸಿಕಗಳಲ್ಲಿ ಪ್ರಕಟಿಸಿದ್ದೇನೆ.  ಎಲ್ಲವನ್ನೂ ತಾವು ಇ-ಪುಸ್ತಕಗಳಾಗಿಯೂ. ಮುದ್ರಿತ ಪುಸ್ತಕಗಳಾಗಿಯೂ ಕೊಳ್ಳಬಹುದು...

ಕರಾಳ ಗರ್ಭ

ISBN-9781311655585

ವಿಜಯ್ ವಿಕ್ರಮ್ ಪತ್ತೇದಾರ ಜೋಡಿಯ ಸಾಹಸ ಕತೆ. ಇದರಲ್ಲಿ ತಮ್ಮ ಕಕ್ಷಿದಾರನ ಹುಟ್ಟು ರಹಸ್ಯವನ್ನು ಹುಡುಕ ಹೊರಟು 30 ವರ್ಷ ಹಿಂದಿನ ಸುಳಿವನ್ನು ಪತ್ತೆ ಹಚ್ಚುವಾಗ ನಡೆಯುವ ಕೌತುಕ ಸನಿವೇಶಗಳನ್ನೊಳಗೊಂಡ ಕತೆ. ಓದಿ ಆನಂದಿಸಿ. ಉತ್ಥಾನ ಮಾಸಿಕದಲ್ಲಿ ಬೆಳಕಿಗೆ ಬಂದ ಧಾರಾವಾಹಿ...

ಮುಳುಗುವ ಕೊಳ

ISBN-9781310371448

ಅವಳಿ ಜವಳಿ ಯುವ ಅಕ್ಕತಂಗಿಯರಲ್ಲಿ  ಅಕ್ಕನ ಸಂಶಯಾಸ್ಪದ ಮರಣ. ತಲೆಗೆ ಕೋಟಿ ರೂ ಜೀವ ವಿಮೆ ಇದ್ದ ಆಕೆಯ ತಂಗಿ ಅದರ ಫಲಾನುಭವಿ. ಹಣಕ್ಕಾಗಿ ಹೆಣ ಬಿತ್ತೆ,?

ಆದರೆ ಯಾರದು, ಕೊಲೆಯೇ ಆದರೆ ಏಕೆ ಮತ್ತು ಹೇಗೆ?? ...ಇದೆಲ್ಲಾ ಪ್ರಶ್ನೆಗಳ ಉತ್ತರ ಹುಡುಕಿ ಹೊರಟ ಪತ್ತೇದಾರ ಕೀರ್ತಿಮಾನ್ ಕಂಡ ಸತ್ಯವೇನು? ಓದಿ ಆನಂದಿಸಿ.

ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾದ ಕಿರು ಕಾದಂಬರಿ ಧಾರಾವಾಹಿ

ಸುವರ್ಣ ಕರಾವಳಿ

ISBN-9781370175048

ಪಶ್ಚಿಮ ಕರಾವಳಿಯಲ್ಲಿ ಕಳುವಾದ ಜಲಾಂತರ್ಗಾಮಿ ಸಬ್-ಮೆರೀನ್ ನೌಕೆಯ ಶೋಧಕ್ಕೆಂದು ನೇವಿ ಏಜೆಂಟ್ ಕ್ಯಾಪ್ಟನ್ ಸಾತ್ವಿಕ್ ಅರಸ್,  ಕಪಟ ನಾಟಕವಾಡಿ ಕಾರವಾರ ಬಳಿ ಗೋವಾ ಗಡಿಯಲ್ಲಿರುವ ತೈಲ ಬಾವಿ ರಿಗ್ ಒಡೆಯ ಕಮಾಡೋರ್ ನಾಯಕ್‍‌ರವರ ಮನೆ ಸೇರುತ್ತಾನೆ. 

ಅವರ ಮನೆಯಲ್ಲಿ ಸಂದೇಹಾಸ್ಪದ ವ್ಯಕ್ತಿಗಳ ಕೂಟವೊಂದು ಯಾವುದೋ ದೇಶದ್ರೋಹಿ ಅಂತರರಾಷ್ಟ್ರೀಯ ಷಡ್ಯಂತ್ರ ರಚಿಸಿದ್ದಾರೆ. ಆಗ ಶತ್ರುಗಳು ಅವನ ದಾರಿಯಲ್ಲಿ ಸವಾಲು ಒಡ್ಡುತ್ತಾರೆ...

ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುವ,  ಅಂಡರ್-ವಾಟರ್ (ನೀರಿನಡಿ) ಸಾಹಸಗಳನ್ನೊಳಗೊಂಡ, ಕೊನೆಯ ಪುಟದವರೆಗೂ ಸಸ್ಪೆನ್ಸ್ ಕಾದಿರಿಸಿಕೊಳ್ಳುವಂತಾ ಕತೆ

ನಾಳೆಯನ್ನು ಗೆದ್ದವನು

ISBN-978137032181

ಇಂಟೆಲಿಜೆನ್ಸ್ ಬ್ಯೂರೋ ಉಪ ನಿರ್ದೇಶಕ ಅಭಿಮನ್ಯು ಸಾಲಿಯಾನ್ ಜನವರಿ 1, 2050 ರ ಬೆಳಿಗ್ಗೆ ನಂದಿಬೆಟ್ಟದಿಂದ ಕಾರಿನಲ್ಲಿ ಬರುತ್ತಿರಲು ಬೃಹತ್ ಗಾತ್ರದ ಲೋಹದ ಗೋಲಾಕಾರದ ಒಂದು ಗಗನನೌಕೆ ಅವನೆದುರು ಆಗಸದಲ್ಲಿ ಕಂಡುಬಂದು ಅವನನ್ನು ಬಲವಂತವಾಗಿ ಒಳಕ್ಕೆ ಸೆಳೆದೊಯ್ಯುತ್ತದೆ. ಆರು ಆಯಾಮಗಳಲ್ಲಿ ಇದ್ದು ಮಾನವನ ಕಣ್ಣಿಗೇ ಬೀಳದಂತೆ ಇರುವ ಬಿಲಿಯನ್ ಜ್ಯೊತಿವರ್ಷ ಕಾಲ ಮುನ್ನೆಡೆದಿರುವ ಈ ಅನ್ಯಗ್ರಹ ಜೀವಿ ತಂಡದ ಕ್ಯಾಪ್ಟನ್ ಏಸ್ ಮಾನವರೂಪದ ಹೋಲೋಗ್ರಾಮಿನಲ್ಲ್ಲಿ ಎದುರಾಗಿ ತಾವು ಕಾಲ-ದೇಶಗಳ ಸೃಷ್ಟಿಯ ಮರ್ಮವನ್ನು ಭೇಧಿಸಿದವರೆಂದೂ, ತಾವು ಇಚ್ಚಾಬಲದಿಂದಲೇ ಮಾನವನಿಗೆ ಇಂದು ನಂಬಲಸಾಧ್ಯವಾದ ವೈಜ್ಞಾನಿಕ ಸಾಧನೆ ಪವಾಡಗಳನ್ನು ಮಾಡಿ ಉದಾಹರಣೆ ಕೊಟ್ಟು ಅಭಿಮನ್ಯುವಿಗೆ ಅಂದು ಸಂಜೆಯೊಳಗೆ ತಾವು ಕಂಡ ಒಂದು ಭಯೋತ್ಪಾದಕರ ಜಾಲದ ಬಗ್ಗೆ ಮಾಹಿತಿ ನೀಡುತ್ತಾರೆ. ಅವನನ್ನು ಕಾಲಮಾನದಲ್ಲಿ ಹಿಂದಿನ ದಿನಕ್ಕೆ ಭೂಮಿಗೆ ಕೊಂಡೊಯ್ದು ಬಿಡಲು ಒಂದು ವರ್ಮ್ ಹೋಲ್ ಅಥವಾ ಹುಳುಹಾದಿ ಸುರಂಗವನ್ನು ಅಂತರಿಕ್ಷದಲ್ಲಿ ಸೃಷ್ಟಿಸಿ ಕೊಡಬಲ್ಲೆವೆಂದೂ ಹೇಳಿ ಅವನಿಂದ ಒಂದು ದಿಟ್ಟ ಸಾಹಸವನ್ನು ಕೋರುತ್ತಾರೆ...ಮುಂದೇನಾಯಿತು, ನೀವೇ ಓದಿ ನೋಡಿ!

ರಕ್ತಚಂದನ - ಕಥಾ ಸಂಕಲನ

ISBN-9781370003037

ಈ ವೈವಿಧ್ಯಮಯ ಕಥಾ ಸಂಕಲನದಲ್ಲಿ ಹದಿನೈದು ಸಣ್ಣ ಕತೆ - ನೀಳ್ಗತೆಗಳ ಹೂರಣವಿದೆ. ಹಲವು ಪತ್ತೇದಾರಿ ಮತ್ತು ಕೆಲವು ಸಾಮಾಜಿಕ ಮತ್ತು ಭಾವುಕ ಕಥಾವಸ್ತುಗಳವು. ಹಲವು ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ.

Time Renewed

ISBN-9781365774256

English translation of the Authors popular Kannada Sci fi Novel- NaaLeyannu Geddavanu.
Involves a UFO kidnapping an Intelligence agent and asking him to save his country and planet from a disaster by travelling to his past by 24 hours through a wormhole. Thrilling adventure unfolds

FOLLOW ME

  • Facebook Social Icon
  • Twitter Social Icon
  • YouTube Social  Icon